ನಮೋ ರಾಘವೇಂದ್ರ
ಹಸಿದು ಬಂದ ಕಂದಗೇ ಹಾಲೂಡಿಸುವ ನಂದನ ಸಾರ್ವಭೌಮ ಯತೀಶನೇ ರಾಘವೇಂದ್ರ ನಮೋ ನಮೋ ||ಪ|| ಬಾಲಮಾನಸ ಮಂದಿರ ತುಂಬಿಹೆ ನೀನು ಚಂದಿರ ತಂಪೆರೆಯುತ ಕಾಯು ನೀ ರಾಘವೇಂದ್ರ ನಮೋ ನಮೋ ||೧|| ತುಂಗೆ ತೀರದಿ ನಿಂತಿಹೆ ಭಕ್ತ ಭಕ್ತರ ಪಾಲಿಸೆ ಮಂತ್ರ ಗಾನದಿ ಪ್ರಸನ್ನಾ ರಾಘವೇಂದ್ರ ನಮೋ ನಮೋ ||೨|| ಭಕ್ತಿಯೊಲ್ಮೆಯ ಪೂಜೆಗೇ ಶುದ್ಧ ಮಾನಸ ಧ್ಯಾನಕೇ ಒಲಿಯೋ ಗುರು ಶ್ರೇಷ್ಠನೇ ರಾಘವೇಂದ್ರ ನಮೋ ನಮೋ ||೩|| ಫಲ ವಾಂಛೆಯೆಲ್ಲವನು ಇಲ್ಲವೆನ್ನದೆ ನೀಡುವಾ ಮಂತ್ರಾಲಯ ಪುರಾಧೀಶ ರಾಘವೇಂದ್ರ ನಮೋ ನಮೋ ||೪|| ಚಂದನವು ನಿನ್ನಾನಾಮ ನಂದನವು ನಿನ್ನಾನೆಲ ಬೃಂದಾವನದಿ ಐತಿಹ್ಯ ರಾಘವೇಂದ್ರ ನಮೋ ನಮೋ ||೫|| ವೃಂದ ವೃಂದದಿ ಭಕ್ತರು ದರ್ಶನ ಬೇಡಿದಾಗಲೇ ಕ್ಷಣಮಾತ್ರದಿ ಪ್ರತ್ಯಕ್ಷ ರಾಘವೇಂದ್ರ ನಮೋ ನಮೋ ||೬|| ಹೃನ್ಮನವು ಮಲ್ಲಿಗೆಯು ಕಣ್ಣೊಲ್ಮೆಯಾ ಮಹಾನದಿ ಧ್ವನಿಯು ಮಾಣಿಕ್ಯಮಣಿ ರಾಘವೇಂದ್ರ ನಮೋ ನಮೋ ||೭|| ಮಧುರ ಮಾತಿನಿಂದಲೇ ಮನ್ಮಂದಿರ ಗೆಲ್ಲುವೆಯೋ ಶರಣೆಂದೊಡೆ ಬಾರಯ್ಯಾ ರಾಘವೇಂದ್ರ ನಮೋ ನಮೋ ||೮|| ಭಾವ ಭಾವದಲ್ಲಿ ರಾಮ ರಾಮ ನಾಮದಲ್ಲೀಜಗ ರಾಮ ದರ್ಶನ ಮಾಡಿಸೋ ರಾಘವೇಂದ್ರ ನಮೋ ನಮೋ ||೯|| ಗುಣಾಧೀಶ ನಮೋ ನಮೋ ಕೃಪಾನಿಧಿ ನಮೋ ನಮೋ ಭವ್ಯಕೃತೇ ನಮೋ ನಮೋ ರಾಘವೇಂದ್ರ ನಮೋ ನಮೋ ||೧೦|| ಪಯಣಿಗನ ಭಾವದೀ ಕಾವ್ಯದಿಂದ ನಮೋ ನಮೋ ಅಕ್ಷರದಿ ನಮೋ ನಮೋ ರಾಘವೇಂದ್ರ ನಮೋ ನಮೋ ||೧೧|| - ಪ್ರಕಾಶ ಪಯಣಿಗ