Posts

Showing posts with the label vishnu

ದ್ವಾದಶಾವತಾರ ಕಾವ್ಯ

Image
ಜಲವೆದ್ದು ಜಗಮುಳುಗಿ ಹೊಳೆಯು ತಾ ಕಡಲಾಗಿ ಜೀವಸೆಲೆ ಬತ್ತಿ ಧಗಧಗಿಸಿ | ಕುಲಕೋಟಿ ಕರುಣೆಯಲಿ ಬಾ ಎನಲು ಕೈನೀಡಿ ಕಾಪಾಡು ಮೀನ ತಾ ಅವತರಿಸಿ ||೧|| ಮಂದರನ ಕಂದರದಿ ಛಾಪ ವಾಸುಕಿ ಪಿಡಿದು ಸುಧೆಗಾಗಿ ಪಾಲ್ಗಡಲ ಕಡೆಯೆ | ಗಿರಿಗಾಮೆ ಬಲವಾದೆ ಲಕುಮಿ ತಾ ಸೋಜಿಗದಿ ಬರುತಿರೆ ಸತಿಯಾಗಿ ಸಿರಿಯ ಪಡೆವೆ ||೨|| ಇಳೆಯ ತಾ ಪಿಡಿದು ಗೋಳಾಡಿ ಪಾತಾಲ ಅಸುರ ಬಲ ಗಹಗಹಿಸಿ ಹಗೆತನದಿ | ವಸುಮತಿಪತಿ ಪದುಮಳ ಕಾಪಾಡೆ ಕೋರೆಯಲಿ ನಗುತ ಕುಳಿತ ಭುವಿಯು ಒಡೆತನದಿ ||೩|| ಪಾಹಿ ಪಾಹಿ ಕೇಶವ ಪಾಹಿ ನೀ ಮಾಧವ ಕರೆದ ಕಶಿಪುಸುತ ಜ್ಞಾನಮಂದಿರ | ಕಂಬದೊಳು ಬಿಂಬ ತಾ ಮೈದಳೆದ ನರಸಿಂಹ ಪೊರೆಯೊ ಕರುಣದಿ ಬಕುತ ಬಂಗಾರ ||೪|| ಬಲರೊಳು ಅತಿಬಲ ಬಲಿ ತಾನೆನುತ ಬೀಗಿರಲು ಕರದೊಳಗೆ ತ್ರಿಭುವನ ಭವನ | ಅವತರಿಸಿ ವಟುವಾಗಿ ಬೇಡಿ ಮೂರಡಿ ಚರಣ ಶಿರದೊಳಗೆ ಮೋಹ ಕಳೆವ ವಾಮನ ||೫|| ಆಳರಸ ಅರಿಯಾಗಿ ಜನಮನಕೆ ಕೆಡುಕಾಗೆ ವನಜನಾಭ ನೀ ದಯದಿ ಹರಸು | ಪೊರೆದು ಪಾಲಿಸೆ ಜಗವ ತರಿದು ಅರಸರ ಶಿರವ ಮೆರೆಯಿತಾಗ ಭಾರ್ಗವನ ಪರಶು ||೬|| ದುರುಳನಾ ದಶಮುಖ ಜಾನಕಿಯ ಸೆಳೆದೊಯ್ಯೆ ದರ್ಪವಳಿದು ಹತ ಪ್ರಾಣ ರಾವಣ | ಜಗಕೆ ದೃಷ್ಟಾಂತ ನೀ ಕುಲಕೆ ಭೂಷಣನು ನೀ ಇಳೆಯ ಪುರುಷೋತ್ತಮ ರಾಘವ ||೭|| ಪಾಂಡವರ ಹೆಸರಿನಲಿ ಗೀತ ಸಾರವನರುಹಿ ಧರ್ಮನಿಧಿ ನರಗೆ ಸಾರಥಿ | ಅಸುರ ಕುಲಕೋಟಿ ಬಲ ಮುರಿದು ತಾ ಛಲದಲಿ ಜಗಪೊರೆವ ಮುರಾರಿ ನಿನಗಾರತಿ ||೮|| ಜನಮನಕೆ ಮೋಕ್ಷದ ಮಾರ್ಗವ ತೋರೆ ತಾ ಅವತರಿಸಿ ಗುರುವಾದನಾ ಬು...

ಜಯತು ಜಯತು ವಿಷ್ಣುಮೂರ್ತಿ

Image
ಮರುಗದಿರು ಮರುಗದಿರು ಓ ಮಾನವ ಇಳೆಗೆ ಬೆಳಕಾಗಿ ಇಳಿದಿಹನು ಮಾಧವ ||ಪ|| ಶ್ಯಾಮಲೆಯ ಮಡಿಲಲ್ಲಿ ಪಯಸ್ವಿನಿಯ ತಟದಲ್ಲಿ ಕರುಣದಿಂದಲಿ ಪೊರೆಯುತಾ ನೆಲೆಸಿಹನು ದೇವದೇವ ವಿಷ್ಣುದೇವ ||೧|| ಕುಂಟಾರಿನ ಪುರದಲ್ಲಿ ಪಾಡಿಬರುವ ಮನದಲ್ಲಿ ಬೆಳಕು ತಾನಾಗಿ ಹೊಳೆದಿಹನು ಭುವಿಸಿರಿಗೊಡೆಯ ಜಗದೀಶ ||೨|| ಜಲನಿಧಿಯ ಅಲೆಯಲ್ಲಿ ತರುಲತೆಯ ಕೊರಳಲ್ಲಿ ಝುಳು ಝುಳು ನಾದ ಕುಹೂ ಕುಹೂ ಗಾನ ಹರಿ ನಿನ್ನ ಧ್ಯಾನ ||೩|| ನೇಸರನ ಕಿರಣದಲಿ ತಂಬೆಲರ ಸ್ಪರ್ಶದಲಿ ಗೋವಿಂದ ನಿನ್ನ ನಾಮ ಅದು ಓಂಕಾರ ನಾದ ಶ್ರೀಕಾರ ನಾದ ||೪|| ಪುರಜನರು ಮನಸಿನಲಿ ಭಕ್ತಿ ಭಾವ ತುಂಬುತಲಿ ಭಜಿಸಿ ಪ್ರಾರ್ಥನೆಯ ಮಾಡುತಿರೆ ಕೃಪೆದೋರುವೆ ಓ ಜಗನ್ನಾಥನೇ ||೫|| ಅಗಣಿತ ಭಕ್ತರ ಸಲಹುತಲಿ ಮಮತಾ ಸುಧೆ ಹರಿಸುತಲಿ ತಂದೆ ನೀ ತಾಯಿ ನೀ ಬಳಗ ನೀ ಜಗದೇಕ ಬಂಧು ಕರುಣಾ ಸಿಂಧು ||೬|| ಶರಣಾಗತರನು ಕಾಯುತಲಿ ವಾಂಛಿತ ಫಲವೀಯುತಲಿ ಭಕ್ತವತ್ಸಲ ನೀನಿರಲು ದಾಸ ನಾ ನಿನಗೆ ಆದಿದೇವನೆ ||೭|| ಕರಮುಗಿದು ವಂದಿಪೆನು ಹರಿ ನಿನ್ನ ಚರಣದಲಿ ಕಾಪಾಡು ನೀ ಎನ್ನ ಮರುಕದಲಿ ಮದುಸೂದನ ನಾರಾಯಣ ಲಕ್ಷ್ಮೀನಾರಾಯಣ ||೮|| ಬಾಲ ಭಾಷೆಯಲೀ ಕವನ ನಾರಾಯಣನ ಗಾನ ಕುಣಿಕುಣಿದು ಕೇಳಿ ಪಯಣಿಗನ ಹರಸೋ ಕುಂಟಾರು ಪುರದೀಶ  ||೯|| - ಪ್ರಕಾಶ ಪಯಣಿಗ