Posts

Showing posts from August, 2019

ಕ್ಯಾನ್ಸರ್ ತಡೆಗೆ ನ್ಯಾನೋ ಲಸಿಕೆ....

Image
ವೈದ್ಯವಿಜ್ಞಾನ ಬೆಳೆಯುತ್ತಲೇ ಇದೆ. ಒಂದು ಕಾಲದಲ್ಲಿ ಗುಣಪಡಿಸಲು ಸಾಧ್ಯವೇ ಇಲ್ಲದ ಕಾಯಿಲೆ ಅನ್ನಿಸಿಕೊಂಡಿದ್ದ ಕ್ಯಾನ್ಸರ್ ಈಗ ಬಹುತೇಕ ಗುಣಪಡಿಸಲು ಸಾಧ್ಯವಾಗುವಂತೆ ಮಾಡಿದೆ ವೈದ್ಯವಿಜ್ಞಾನ. ಕ್ಯಾನ್ಸರ್ ರೋಗದಲ್ಲಿ ವಿವಿಧ ಪ್ರಾಕಾರಗಳಿವೆ. ಅದರಲ್ಲಿ ಮೆಲನೋಮಾ ಅಂದರೆ ಚರ್ಮದ ಕ್ಯಾನ್ಸರ್ ಗೆ ಈಗ ವೈದ್ಯವಿಜ್ಞಾನ ಅದ್ಭುತವಾದ ಲಸಿಕೆಯೊಂದನ್ನು ಕಂಡು ಹಿಡಿದಿದೆ. ಅದು ನ್ಯಾನೋ ಲಸಿಕೆ... ! ಹೌದು, ಟೆಲ್ ಅವೈವ್ ಯೂನಿವರ್ಸಿಟಿಯ ಸಂಶೋಧಕರು ಈ ನ್ಯಾನೋ ಲಸಿಕೆಯನ್ನು ಅನ್ವೇಷಿಸಿದ್ದಾರೆ. ಈ ಲಸಿಕೆಯು ಮೆಲನೋಮಾ ಅಂದರೆ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವುದು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಮೆಲನೋಮಾ ಮರುಕಳಿಸದಂತೆ ತಡೆಗಟ್ಟುತ್ತದೆ. ಈಗಾಗಲೇ ಇಲಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಿದ್ದು, ಇದರಲ್ಲಿ ಗಣನೀಯ ಯಶಸ್ಸು ಲಭಿಸಿದೆ ಎನ್ನುತ್ತಾರೆ ವಿಜ್ಞಾನಿ ರೋನಿತ್ ಫನರೋ. ಫನರೋ ನೇತೃತ್ವದ ವಿಜ್ಞಾನಿಗಳ ತಂಡ ನ್ಯಾನೋ ಕಣಗಳ ಅನ್ವೇಷಣೆ ಮಾಡಿದ್ದು, ಆ ಕಣಗಳಲ್ಲಿ ಕ್ಯಾನ್ಸರ್ ನಿವಾರಣೆ ಮಾಡುವ ಮತ್ತು ಶರೀರದ ರೋಗ ಪ್ರತಿಬಂಧಕ ವ್ಯವಸ್ಥೆಯನ್ನು ಸದೃಢಗೊಳಿಸುವ ಔಷಧಿಗಳನ್ನು ಸೇರಿಸಲಾಗಿದೆ. ಜೈವಿಕವಾಗಿ ವಿಂಗಡನೆಯಾಗಬಲ್ಲ ಪಾಲಿಮರ್ ಬಳಸಿ ಈ ನ್ಯಾನೋ ಕಣಗಳನ್ನು ತಯಾರಿಸಿರುವ ಕಾರಣ ಯಾವುದೇ ಅಡ್ಡಪರಿಣಾಮಗಳನ್ನು ಕೂಡಾ ಬೀರುವಿದಿಲ್ಲ ಎನ್ನಲಾಗಿದೆ. ಈಗಾಗಲೇ ಮೆಲನೋಮಾ ಕ್ಯಾನ್ಸರ್ ನಿಂದ ಬಳಲುತ್ತಿರುವ ಮನುಷ್ಯರ ಜೇವಕೋಶಗಳನ್ನು ಪಡೆದ

ಐತರೇಯ

Image
ಪ್ರಾಚೀನ   - ಅರ್ವಾಚೀನಗಳ ಸಂಗಮ ಭರತ ಭೂಮಿಯ ಸನಾತನ ಪರಂಪರೆಗೆ ತನ್ನದೇ ಆದ ವೈಶಿಷ್ಟ್ಯವಿದೆ . ಇಡೀ ಪ್ರಪಂಚಕ್ಕೆ ಮಹತ್ತಾದ ಜೀವನ ಪಾಠವನ್ನು ಆದರ್ಶ , ನೈತಿಕತೆ , ಮಾನವೀಯತೆಯ ಪರಿಪೂರ್ಣ ಕಲ್ಪನೆಯೊಂದಿಗೆ ಕಟ್ಟಿಕೊಟ್ಟ ಸಂಸ್ಕೃತಿ ನಮ್ಮದು . ಹಲವು ಮಂತ್ರ ದೃಷ್ಟಾರರು , ಋಷಿ ಮುನಿಗಳು ಪ್ರಕೃತಿಯೊಂದಿಗೆ ಸಾಧಿಸಿದ ಪೂಜನೀಯ ಸಂಬಂಧಗಳ ಪ್ರತಿಫಲವಾಗಿ ಪ್ರಕೃತಿಯೂ ಕೂಡ ಆಧುನಿಕ ವಿಜ್ಞಾನಕ್ಕೆ ಸಮಾನವಾದ ಬಹಳಷ್ಟು ಒಳಗುಟ್ಟುಗಳನ್ನು ತರಂಗಾಂತರಗಳ ಮೂಲಕ ಅವರ ದಿವ್ಯದೃಷ್ಟಿಗೆ ಬಿಟ್ಟುಕೊಟ್ಟಿತು . ಅದನ್ನು ಉಪಯೋಗಿಸಿಕೊಂಡ ನಮ್ಮ ಪೂರ್ವಜರು ವೇದ ,  ಪುರಾಣ , ಪ್ರಾಚೀನ ಇತಿಹಾಸ , ಶಾಸ್ತ್ರ ಇತ್ಯಾದಿಗಳ ಮುಖಾಂತರ   ತಮ್ಮ ಮುಂದಿನ   ಪೀಳಿಗೆಗೆ ಧಾರ್ಮಿಕ ಪರಿಭಾಷೆಯೊಂದಿಗೆ ವರ್ಗಾಯಿಸಿದರು . ಅವುಗಳಲ್ಲಿ ಪ್ರಮುಖವಾದ ವೇದದ ಅಂಗ ಉಪನಿಷತ್ತುಗಳು . ಋಗ್ವೇದದ ಉಪನಿಷತ್ತಾದ ಐತರೇಯ ಉಪನಿಷತ್ತು ಇವುಗಳಲ್ಲಿ ಬಹುಮುಖ್ಯವಾದುದು . ಐತರೇಯ ಉಪನಿಷತ್ತಿನಲ್ಲಿ ಆಧುನಿಕ ವಿಜ್ಞಾನಕ್ಕೆ ಪೂರಕವಾಗುವ ಹಲವಾರು ಸಂಗತಿಗಳಿವೆ . ಇದೊಂದು ರೀತಿ ಪ್ರಾಚೀನ - ಅರ್ವಾಚೀನಗಳ ಸಂಗಮವೇ ಸರಿ . ಈ ವಿಚಾರವನ್ನು ಕಂಡುಕೊಂಡ ನಾವು ಈಗಿನ ಯುವಪೀಳಿಗೆಗೆ ಮೇಲ್ಕಾಣಿಸಿದ ವಿಷಯಗಳನ್ನು ಹಸ್ತಾಂತರಿಸಿ ಬೌದ್ಧಿಕವಾಗಿ ಅವರನ್ನು ಶ್ರೀಮಂತಗೊಳಿಸುವ ತನ್ಮೂಲಕ ಯುವ ಸಮಾಜವನ್ನ

ಹೈಜೆನಿಕ್ (ನೈರ್ಮಲ್ಯ) ಎಂಬ ಭ್ರಮಾಭೂತ...

Image
ಕಾಲ ಆಧುನಿಕತೆಯ ಓಘಕ್ಕೆ ಸಿಲುಕಿ ಶರವೇಗದಲ್ಲಿ ಚಲುಸುತ್ತಿರುವ ಮಧ್ಯೆಯೇ ಮಾನವನ ಮನಸ್ಸಿನಲ್ಲಿ ಹಲವು ರೀತಿಯ ಭ್ರಮೆಗಳು ವಕ್ಕರಿಸುತ್ತಿವೆ. ಹಣದ ಭ್ರಮೆ, ಐಷಾರಾಮದ ಭ್ರಮೆ, ಆರೋಗ್ಯದ ಭ್ರಮೆ, ಹಾಗೆಯೇ... ಹೈಜೆನಿಕ್ ಅರ್ಥಾತ್ ನೈರ್ಮಲ್ಯದ ಭ್ರಮೆ... ವಿವಿಧ ಬ್ರಾಂಡ್ ನ ಕಂಪನಿಗಳು ತಾವು ತಯಾರಿಸಿದ ವಿಭಿನ್ನ ಉತ್ಪನ್ನಗಳಿಗೆ ಮಾರುಕಟ್ಟೆ ಪಡೆಯಲೋಸುಗ ಸೃಷ್ಟಿಸಿದ ಭ್ರಮೆಗಳು ಇವೆಲ್ಲ... ಔಷಧಿ ತಯಾರಿಕಾ ಕಂಪನಿಗಳು ಆರೋಗ್ಯ ಭ್ರಮೆ ಸೃಷ್ಟಿಸಿದರೆ, ಸೋಪು, ಪ್ಲಾಸ್ಟಿಕ್ ವಸ್ತುಗಳ ತಯಾರಿಕಾ ಕಂಪನಿಗಳು ನೈರ್ಮಲ್ಯದ ಭ್ರಮೆ ಸೃಷ್ಟಿಸಿವೆ. ಆ ಭ್ರಮೆಯಲ್ಲಿ ಮುಳುಗಿದ ಮಾನವ ಇರುವ ಆರೋಗ್ಯ, ನೈರ್ಮಲ್ಯವನ್ನೂ ಕಳೆದುಕೊಳ್ಳುತ್ತಿರುವುದು ಮಾತ್ರ ಅರಿವಿಗೇ ಬರುತ್ತಿಲ್ಲ. ಪ್ರತಿಯೊಂದು ಜೀವಿಗೂ ಇರುವ ಮಧುಮೇಹ (ಶುಗರ್), ರಕ್ತದೊತ್ತಡ(ಬಿಪಿ)ವನ್ನೇ ದೊಡ್ಡ ರೋಗವಾಗಿ ಪರಿವರ್ತಿಸಿ ದಿನನಿತ್ಯವೂ ಗುಳಿಗೆ ತಿನ್ನುವಂತೆ ಮಾಡಿದೆ ವೈದ್ಯಜಗತ್ತು. ಔಷಧಿ ತಯಾರಿಕಾ ಕಂಪನಿಗಳು ಮತ್ತು ವೈದ್ಯಜಗತ್ತು ಸೃಷ್ಟಿಸಿದ ಭ್ರಮೆಗಳ ಕುರಿತು ಮಾತಾಡಲು ಹೊರಟರೆ ವರುಷವಾದರೂ ಮುಗಿಯಲಿಕ್ಕಿಲ್ಲ. ಅದಿರಲಿ, ಈ ಹೈಜೆನಿಕ್ ಭ್ರಮೆಯ ಬಗ್ಗೆ ಸ್ವಲ್ಪ ವಕ್ರದೃಷ್ಟಿ ಬೀರೋಣ. ಕೆಲ ತಿಂಗಳ ಹಿಂದೆ ಅಪರೂಪಕ್ಕೋ ಎಂಬಂತೆ ನನ್ನ ಸ್ನೇಹಿತನಿಂದ ಕರೆಬಂತು. ಕರೆ ಸ್ವೀಕರಿಸಿದರೆ ಅತ್ತಲಿಂದ ದುಃಖತಪ್ತ ಧ್ವನಿ. ಯಾಕೋ, ಏನಾಯ್ತೋ ? ಎಂದು ವಿಚಾರಿಸಿದೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್