Posts

Showing posts with the label medicine

ದ್ವಾದಶಾವತಾರ ಕಾವ್ಯ

Image
ಜಲವೆದ್ದು ಜಗಮುಳುಗಿ ಹೊಳೆಯು ತಾ ಕಡಲಾಗಿ ಜೀವಸೆಲೆ ಬತ್ತಿ ಧಗಧಗಿಸಿ | ಕುಲಕೋಟಿ ಕರುಣೆಯಲಿ ಬಾ ಎನಲು ಕೈನೀಡಿ ಕಾಪಾಡು ಮೀನ ತಾ ಅವತರಿಸಿ ||೧|| ಮಂದರನ ಕಂದರದಿ ಛಾಪ ವಾಸುಕಿ ಪಿಡಿದು ಸುಧೆಗಾಗಿ ಪಾಲ್ಗಡಲ ಕಡೆಯೆ | ಗಿರಿಗಾಮೆ ಬಲವಾದೆ ಲಕುಮಿ ತಾ ಸೋಜಿಗದಿ ಬರುತಿರೆ ಸತಿಯಾಗಿ ಸಿರಿಯ ಪಡೆವೆ ||೨|| ಇಳೆಯ ತಾ ಪಿಡಿದು ಗೋಳಾಡಿ ಪಾತಾಲ ಅಸುರ ಬಲ ಗಹಗಹಿಸಿ ಹಗೆತನದಿ | ವಸುಮತಿಪತಿ ಪದುಮಳ ಕಾಪಾಡೆ ಕೋರೆಯಲಿ ನಗುತ ಕುಳಿತ ಭುವಿಯು ಒಡೆತನದಿ ||೩|| ಪಾಹಿ ಪಾಹಿ ಕೇಶವ ಪಾಹಿ ನೀ ಮಾಧವ ಕರೆದ ಕಶಿಪುಸುತ ಜ್ಞಾನಮಂದಿರ | ಕಂಬದೊಳು ಬಿಂಬ ತಾ ಮೈದಳೆದ ನರಸಿಂಹ ಪೊರೆಯೊ ಕರುಣದಿ ಬಕುತ ಬಂಗಾರ ||೪|| ಬಲರೊಳು ಅತಿಬಲ ಬಲಿ ತಾನೆನುತ ಬೀಗಿರಲು ಕರದೊಳಗೆ ತ್ರಿಭುವನ ಭವನ | ಅವತರಿಸಿ ವಟುವಾಗಿ ಬೇಡಿ ಮೂರಡಿ ಚರಣ ಶಿರದೊಳಗೆ ಮೋಹ ಕಳೆವ ವಾಮನ ||೫|| ಆಳರಸ ಅರಿಯಾಗಿ ಜನಮನಕೆ ಕೆಡುಕಾಗೆ ವನಜನಾಭ ನೀ ದಯದಿ ಹರಸು | ಪೊರೆದು ಪಾಲಿಸೆ ಜಗವ ತರಿದು ಅರಸರ ಶಿರವ ಮೆರೆಯಿತಾಗ ಭಾರ್ಗವನ ಪರಶು ||೬|| ದುರುಳನಾ ದಶಮುಖ ಜಾನಕಿಯ ಸೆಳೆದೊಯ್ಯೆ ದರ್ಪವಳಿದು ಹತ ಪ್ರಾಣ ರಾವಣ | ಜಗಕೆ ದೃಷ್ಟಾಂತ ನೀ ಕುಲಕೆ ಭೂಷಣನು ನೀ ಇಳೆಯ ಪುರುಷೋತ್ತಮ ರಾಘವ ||೭|| ಪಾಂಡವರ ಹೆಸರಿನಲಿ ಗೀತ ಸಾರವನರುಹಿ ಧರ್ಮನಿಧಿ ನರಗೆ ಸಾರಥಿ | ಅಸುರ ಕುಲಕೋಟಿ ಬಲ ಮುರಿದು ತಾ ಛಲದಲಿ ಜಗಪೊರೆವ ಮುರಾರಿ ನಿನಗಾರತಿ ||೮|| ಜನಮನಕೆ ಮೋಕ್ಷದ ಮಾರ್ಗವ ತೋರೆ ತಾ ಅವತರಿಸಿ ಗುರುವಾದನಾ ಬು...