Posts

Showing posts with the label Karthika

ಜಯ ಜಯತು ಸುಬ್ರಹ್ಮಣ್ಯ

Image
ನೆಲವು ಬರಡಾಗಿದೆ ನೀನಿಲ್ಲದೇ ದೇವಸೇನಾಪತಿ ಜಲನಿಧಿಯ ಚಿಲುಮೆಯ ಹರಿಸೋ ಶ್ರೀವಲ್ಲಿನಾಥ ||ಪ|| ತಾರಕನ ತಾರಕದ ಅಹಂಕಾರದುರಿಗೆ ಲೋಕ ಲೋಕವೆಲ್ಲ ಬಸುಮವಾಗೆ ಶಿವಶಿವೆಗೆ ಗಂಗೆಯೊಡಲಲಿ ಸುತನಾಗೆ ತಾರಕಾಂತಕನಾಗಿ ಲೋಕ ಬೆಳಗಿದೆ ವಲ್ಲೀಶ ||೧|| ಸೊರಗಿದ್ದ ಕೃತ್ತಿಕೆಯರೆದೆಯಲಿ ಒಲುಮೆಯುಕ್ಕಿ ಪಾಲ್ಗಡಲು ಹರಿಯೆ ಅಮೃತವ ಕುಡಿದಾರು ಮುಖದಲಿ ತಾಯ್ತನಕೆ ಹೊಳಹಾದೆ ನೀ ಕಾರ್ತಿಕೇಯ ||೨|| ಅಸುರರ ಅಟ್ಟಹಾಸಕೆ ಮಣಿದು ಸುರಸೇನೆ ಬಲಹೀನವಾಗಿರಲು ನಾಯಕನು ನೀನಾಗಿ ಛಲದಿ ಮೆರೆದು ಶೂರತನದ ಕಿಚ್ಚೇಳಿಸಿದೆ ಸುರಸೈನ್ಯನಾಥ ||೩|| ದೇವಸೇನಾ ಶ್ರೀವಲ್ಲಿಯ ಕರಪಿಡಿದು ಪ್ರೇಮಸಾಗರದಿ ಮಿಂದು ದಣಿದು ಬಾಳಾಯ್ತು ಹಸಿರಸಿರ ನಂದನವನ ನೀನಿರಲು ದೇವಾಸೇನಾಪತಿ ಶ್ರೀವಲ್ಲಿನಾಥ ||೪|| ಮನ ಮನ ಬನದ ಹಸಿರುಡುಗಿ ಕಲ್ಲು ಕಲ್ಲಕಟ್ಟೆಯಲಿ ಬನವಡಗಿ ನೀನಿಲ್ಲದೇ ಎನಿತು ಪೂಜಿಸಿ ಫಲವೇನು ಮನ ಬನದಿ ಚಿಗುರು ಮೂಡಿಸೋ ಕುಮಾರ ||೫|| ಚಿತ್ತ ಚಿತ್ತವಿದು ಜ್ಞಾನದಾಹದ ಹುತ್ತ ಹುತ್ತವೊಡೆದು ಕಲ್ಲುಕಡಿದು ಶಿಲೆಯನಿಡೆ ಹಾಲ ಹೊಳೆ ಹರಿಸುವ ಮೂಢಮನಕೆ ಜ್ಞಾನನಿಧಿಯ ಬೆಳಕ ತೋರೋ ವೇದನಿಧಿ ||೬|| ಮನೋಬುದ್ಧಿಗಳೆರಡು ಜೋಡೆತ್ತು ನೋಡು ಚೇತನದ ಹೊಲವನು ಶ್ರದ್ಧೆಯಲಿ ಹೂಡು ಬಕುತಿಯೋಣಿಯಲಿ ಭಾವ ಜಲವ ಸುರಿಯೆ ಫಲವಾಗಿ ಹೊನ್ನ ಬೆಳೆ ನೀಡೋ ಅನಂತಾನಂತ ||೭|| ಸ್ಕಂದನೂ ನೀನು ಪಾರ್ವತೀಕಂದನೇ ಶರಣು ಗುಹ ಷಣ್ಮುಖ ಮಯೂರವಾಹನನೇ ಶರಣು ಕಲಾಧರ ಮಾಯಾಧರ ಶಕ್ತಿಧರನೇ ಶರಣು ಶರಣರನು ಪೊರೆಯೋ ಭಕ್ತವ...