Posts

Showing posts with the label rajrajeshwari

ದರುಶನವ ನೀಡು ರಾಜರಾಜೇಶ್ವರಿ

Image
ಚೇತನಕೆ ಚೇತನವ ನೀಡಿ ಮಾಯವಾದೆಯಮ್ಮ ದರುಶನವ ನೀಡೆನಗೆ ರಾಜರಾಜೇಶ್ವರೀ ಅಮ್ಮ ||ಪ|| ಮಾಯದಲಿ ನೀ ಆದಿಮಾಯೆ ಮಾಯಾಲೋಕವ ಸೃಜಿಸಿದ ಮಾಯೆ ಯೋಗನಿದಿರೆಯ ಕಮಲನಾಭನಲಿ ಮಾಯೆಯಾಗಿ ಲೀನಳಾದೆಯಮ್ಮ ||೧|| ಕುಡಿ ನೋಟದ ಕಿಡಿ ಜ್ವಾಲೆಗೆ ದುರುಳರೆಲ್ಲರ ದಹ ದಹಿಸಿ ಲಯಹರನ ಕೆಂಡ ನಯನದಲಿ ಕೆಂಡವಾಗಿ ಲೀನಳಾದೆಯಮ್ಮ ||೨|| ಮನದ ಸಂಕಲ್ಪ ಮಾತ್ರಕೇ ಲೀಲೆಯಾಡುವ ಜಗನ್ಮಾತೃಕೇ ಜೀವ ಸೃಜಿಪ ಬ್ರಹ್ಮ ಮಾನಸದಿ ಮನವಾಗಿ ಲೀನಳಾದೆಯಮ್ಮ ||೩|| ಅಸುರಾರಿ ಹರಿಯ ಚಕ್ರದಲಿ ಪ್ರಲಯಾಂತಕ ಹರನ ಶೂಲದಲಿ ಚತುರ್ಮುಖ ಬ್ರಹ್ಮನ ದಂಡದಲಿ ವಜ್ರವಾಗಿ ಲೀನಳಾದೆಯಮ್ಮ ||೪|| ಸೌಂದರ್ಯದ ಖನಿ ತ್ರಿಪುರಸುಂದರಿ ನಿಧಿಗಳ ಗಣಿಯೆ ನೀನು ಶ್ರೀಲಲಿತೆ ಸಂಪದದೊಡತಿ ಲಕುಮಿಯ ಸಂಪದಕೆ ಭೂಷಣವಾಗಿ ಲೀನಳಾದೆಯಮ್ಮ ||೫|| ಕಾಳಿ ಚಾಮುಂಡಿ ಶಾಂಭವಿಯಾಗಿ ಶುಂಭಾದಿ ಅಸುರಗಣವ ತರಿದು ಶಂಭುವಿಗೆ ಸತಿಯಾಗಿ ಸತಿಯಲಿ ಕಾಲವಾಗಿ ಲೀನಳಾದೆಯಮ್ಮ ||೬|| ಲೋಕದಲಿ ಸರ್ವಜ್ಞಾನಿ ಜ್ಞಾನರೂಪಿಣಿ ಜಗಕೆ ವೇದಗಳ ಬೆಳಕಿತ್ತ ನಾರಾಯಣಿ ಜ್ಞಾನಮಾತೆ ವೀಣಾಪಾಣಿ ಶಾರದೆಯಲಿ ಜ್ಞಾನವಾಗಿ ಲೀನಳಾದೆಯಮ್ಮ ||೭|| ಗ್ರಹ ಗ್ರಹ ರವಿ ಚಂದ್ರರಲಿ ತಾರೆ ತಾರೆ ಬ್ರಹ್ಮಾಂಡದಲಿ ಸೆಳೆವ ಶಕ್ತಿ ತಾನಾಗಿ ಆದಿಶಕ್ತಿ ಕಾಂತವಾಗಿ ಲೀನಳಾದೆಯಮ್ಮ ||೮|| ಉರಿವ ನೇಸರನ ಕಿರಣದಲಿ ತಂಪೆರೆವ ಶಶಿಯ ತಿಂಗಳಲಿ ಪ್ರಭೆಯ ತೇಜೋಪುಂಜ ಆದಿಮಾಯೆ ಪ್ರಭೆಯಾಗಿ ಲೀನಳಾದೆಯಮ್ಮ ||೯|| ಬ್ರಹ್ಮಾಂಡವ್ಯಾಪಿನಿ ಜಗಜ್ಜನನಿ ನೆಲ ಜಲ ಗಿರಿ ಶಿಖರ ಗಗನದಲಿ...